ನಾನು ಗೀಚಿದ ಸಾಲುಗಳ ರಾಶಿ - ೧

ನನ್ನ ಇನ್ನು ಹುಟ್ಟದ ಮಗುವಿಗೆ ಬರೆದಿರುವ ಹನಿಗವನ: ನನ್ನ ಮುದ್ದು ಕುಂಡೆ, ನಿನ್ನ ಅಂಡು ರವೆ ಉಂಡೆ, ತಿಂದು ನಾನು ಆನಂದವ ಕಂಡೆ.

ನಾನು ಗೀಚಿದ ಸಾಲುಗಳ ರಾಶಿ - ೧

ನನ್ನ ಮಡದಿಯು ಗರ್ಭಿಣಿಯಾಗಿ ಆರು ತಿಂಗಳಾದ ಸಂದರ್ಭ, ನನ್ನ ಮನಸ್ಸಿನ ಭಾವನೆಗಳನ್ನು ಎರಡು ಹಾಯ್ಕುಗಳಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿರುವೆ:

ತಿಂಗಳು ಆರು,
ಸ್ಕ್ಯಾನ್ಗಳು ಹಲವಾರು,
ನಾವು  ತಯಾರು.
ಇಂದು ಮಿತ್ರರು,
ಇನ್ಮುಂದೆ ಪೋಷಕರು,
ಹೊಣೆ ನೂರಾರು.

ನನಗೆ ಹೆಣ್ಣು ಕೊಟ್ಟ ಮಾವ ನನ್ನ ಇತ್ತೀಚಿನ ಲೇಖನಗಳ್ಳನ್ನು ಓದಿ, ಒಂದು ಸುಂದರ ಕವನದ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅದನ್ನು ಓದಿ ನನ್ನ ಆತ್ಮವಿಶ್ವಾಸ ಅಳತೆ ಮೀರಿ ಹೆಚ್ಚಾಯಿತು. ನೆಟ್ಟಗೆ ಧನ್ಯವಾದ ಹೇಳದೆ, ನಾನು ನಾಲ್ಕು ಸಾಲು ಗೀಚಿದೆ. ಅದನ್ನು ಇಲ್ಲಿ ಪ್ರಸ್ತುತ ಪಡಿಸಿರುವೆ.

ಸುತ್ತ ಮುತ್ತ ಇದ್ದರೆ ಇಂತಹ ಬಂಧು ಬಳಗ,
ಭಯವಿರದು ನನಗೆ, ಆಗುವೆ ನಾನು ಸಲಗ,
ಮುನ್ನುಗುವೆ, ಮುರಿಯುವೆ ಕಷ್ಟಗಳ ಹಲಗ,
ಸಾಕಾಯಿತು ಪ್ರಾಸ ಬರೆದು ಇಂದು ನನಗ,
ಉತ್ತರದ ಕರ್ನಾಟಕದ ಒಂದು ಭಾಗ ಗದಗ,
ಸಂಬಂಧವಿಲ್ಲದ ವಾಕ್ಯ ತಿಳಿದಿದೆ ನನಗ,
ಇನ್ನು ಬರೆದರೆ ಉರಿಯುವುದು ನಿಮಗ.

ನನ್ನ ಇನ್ನು ಹುಟ್ಟದ ಮಗುವಿಗೆ ಬರೆದಿರುವ ಹನಿಗವನ.

ನನ್ನ ಮುದ್ದು ಕುಂಡೆ,
ನಿನ್ನ ಅಂಡು ರವೆ ಉಂಡೆ,
ತಿಂದು ನಾನು ಆನಂದವ ಕಂಡೆ.

ನನಗೆ ಹೆಣ್ಣು ಕೊಟ್ಟ ಮಾವ ಬರೆದ ಕವನವನ್ನು ಹೊಗಳಿ ಗೀಚಿದ ನಾಲ್ಕು ಸಾಲುಗಳು.

ಬರೆದರೆ ಇರಬೇಕು ಇಂತಹ ಕೈಚಳಕ,
ಓದಿ ಬೆರಗಾದೆ ನಿಮ್ಮ ಪದ ಫಲಕ,
ಉರಿಯಲಿ ನಿಮ್ಮ ಜ್ಞಾನದ ದೀಪ ಜೀವವಿರುವ ತನಕ,
ಹಂಚಿರಿ ನಿಮ್ಮ ವಿವೇಕ, ದಣಿದು ಮಲಗುವ ತನಕ.
ಚಂದಕಿಂತ ಚಂದ,
ನಿಮ್ಮ ಕಾವ್ಯ ಅಂದ,
ನಾನು ಸ್ವಲ್ಪ ಮಂದ,
ಹೇಳಲೇನು ಅರಿಯದು ಮುಂದ.

ನನಗೆ ಹೆಣ್ಣು ಕೊಟ್ಟ ಮಾವನವರ ಅರವತ್ತು ವರ್ಷದ ಹುಟ್ಟುಹಬ್ಬಕ್ಕೆ ನಾನು ಬರೆದ ಹನಿಗವನ. ನನ್ನ ಮಾವನ ಹೆಸರು ಶ್ರೀನಿವಾಸ, ಅವರ ತಾಯಿಯ ಹೆಸರು ತಿಮಕ್ಕ, ಅತ್ತೆಯ ಹೆಸರು ಕಸ್ತೂರಿ, ನಾದಿನಿಯ ಹೆಸರು ಸ್ನೇಹ, ಮೈದುನನ ಹೆಸರು ನಿತಿನ್. ಹುಟ್ಟಿದ ಹಬ್ಬವನ್ನು ಸ್ನೇಹ ಹಾಗು ನಿತಿನರ ಕಸ್ತೂರಿನಗರದ ನಿವಾಸದಲ್ಲಿ ಆಚರಿಸಿದರು. ನನ್ನ ಹೆಂಡತಿಯ ಹೆಸರು ಮೌನ.

ವಾರಕ್ಕೊಂದು ಪದ್ಯ ಬರೆದು ಹಿಂಸಿಸುವ ಮಾವ,
ತಲೆಕೆಡುವುದು ಓದಿದೊಡನೆ ಬೆಳಗಿನ ಜಾವ,
ಬಗೆದರು ಕಾಣದು ಕನ್ನಡದ ಎರಡು ಕಾಳು,
ಭಲೆ ಹೇಳದಿರೆ ಬಗೆಯುವಳು ನಿಮ್ಮ ಮಗಳು.
ತಿಮಕ್ಕನ ತನಯ, ಅರವತ್ತರ ಅಜ್ಜಯ,
ಕಸ್ತೂರಿಯ ಇನಿಯ, ಕ್ಷೀರಸಾಗರದ ಒಡೆಯ
ಹೆಂಡತಿಯ ಅಂತಃಪುರ ಕಸ್ತೂರಿನಗರದಲಿ,
ನಿಮ್ಮಿಬ್ಬರ ತನುಜೆ ಸ್ನೇಹಾಳ ಗೃಹದಲ್ಲಿ,
ಅವಳಿನಿಯ ನಿತಿನನ ಸಾನಿಧ್ಯದಲ್ಲಿ,
ಜನ್ಮದಿನ ಕೊಂಡಾಡಿದಿರೆಂದು ಕೇಳಿಬಂತು ಸುದ್ದಿ,
ಹಾರೈಸಲು ನೆನಪಿಸಿದಳು (ನಿಮ್ಮ) ಮಗಳು ನನಗೆರಡು ಗುದ್ದಿ.
ಅಪರಾಹ್ನದ ಊಟಕ್ಕೆ ಶಿವಸಾಗರಕ್ಕೆ ಲಗ್ಗೆಯಂತೆ,
ಅಕ್ಕ ತಂಗಿ ನಿರ್ಧರಿಸಿದ್ದು ನಿನ್ನೆ ಸಂಜೆಯಂತೆ.
"ಕ್ಷೀರಸಾಗರ ಸಾಲದೇ, ಶಿವನ ಸಾಗರವೇಕೆ ?
ಕಸ್ತೂರಿ ಸಾಲದೇ, ಪಾರ್ವತಿಯು ಬೇಕೆ?"
ಕೇಳಿಬಂದ ಗಾಳಿ ಮಾತು ನನಗಿಲ್ಲ ಚಿಂತೆ.